ടോൾ ഫ്രീ ഇന്ത്യ 1800 425 3939
വിദേശം +91 8802 012345
ഇമെയിൽ mail.norka@kerala.gov.in
bg_image

ನೋರ್ಕ ರೂಟ್ಸ್ ಯು.ಕೆ ರಿಕ್ರೂಟ್‌ಮೆಂಟ್‌- ನರ್ಸುಗಳಿಗೆ ಅವಕಾಶಗಳು. ಸಂದರ್ಶನ 2023-ಅಕ್ಟೋಬರ್ 17, 18 ರಂದು ಮಂಗಳೂರಿನಲ್ಲಿ

image

ಯು.ಕೆ (ಯುನೈಟೆಡ್ ಕಿಂಗ್ಡಮ್) ನಲ್ಲಿರುವ ವಿವಿಧ ಎನ್.ಹೆಚ್.ಎಸ್ (NHS) ಟ್ರಸ್ಟುಗಳಿಗೆ ನರ್ಸುಗಳಿಗಾಗಿ ನೋರ್ಕ ರೂಟ್ಸ್ ರಿಕ್ರೂಟ್‌ಮೆಂಟ್‌ ಡ್ರೈವ್‌ಗಳನ್ನು ಆಯೋಜಿಸುತ್ತದೆ. 2023 ಅಕ್ಟೋಬರ್ 17, 18 ರಂದು ಮಂಗಳೂರಿನಲ್ಲಿ ನಡೆಯುವ ರಿಕ್ರೂಟ್‌ಮೆಂಟ್‌ಗೆ ನರ್ಸಿಂಗ್ ಪ್ರೊಫೆಶನಲ್‌ಗಳಿಗೆ ಈಗ ಅರ್ಜಿ ಸಲ್ಲಿಸಬಹುದು. 2023 ಅಕ್ಟೋಬರ್ 10, 11, 13, 14, 20, 21 ದಿನಾಂಕಗಳಲ್ಲಿ ಕೊಚ್ಚಿಯಲ್ಲಿ ರಿಕ್ರೂಟ್‌ಮೆಂಟ್ ನಡೆಯುತ್ತಿದೆ.

ನರ್ಸಿಂಗ್‌ನಲ್ಲಿ ಪದವಿ ಅಥವಾ ಡಿಪ್ಲೋಮಾ ಹೊಂದಿರುವವರು, ಇಂಗ್ಲೀಷ್ ಭಾಷೆಯಲ್ಲಿ ಪ್ರಾವೀಣ್ಯತೆ ಸಾಬೀತುಪಡಿಸುವ IELTS/ OET ಯು.ಕೆ ಸ್ಕೋರ್ ಇರುವ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಬಹುದು. OET ಪರೀಕ್ಷೆಗೆ ತಯಾರಿ ನಡೆಸುತ್ತಿರುವವರಿಗೂ ಷರತ್ತುಗಳೊಂದಿಗೆ ಭಾಗವಹಿಸಬಹುದು.

ನರ್ಸುಗಳ ಸಂದರ್ಶನವು ಮಂಗಳೂರು ತಾಜ್ ವಿವಾಂತ ಹೋಟೆಲ್‌ನಲ್ಲಿ ಮತ್ತು ಕೊಚ್ಚಿಯ ಹೋಟೆಲ್ ಲೆ-ಮೆರಿಡಿಯನ್‌ನಲ್ಲಿ ನಡೆಯಲಿದೆ.

ಸಾಮಾನ್ಯ ವೈದ್ಯಕೀಯ ಮತ್ತು ಶಸ್ತ್ರಚಿಕಿತ್ಸಾ/ ತುರ್ತು ನರ್ಸ್ ಹುದ್ದೆಗೆ ಅರ್ಜಿ ಸಲ್ಲಿಸುವವರಿಗೆ ಕಳೆದ 3 ವರ್ಷಗಳಲ್ಲಿ ಸಂಬಂಧಿತ ವಿಭಾಗದಲ್ಲಿ ಕನಿಷ್ಠ ಒಂದು ವರ್ಷಗಳ ಕೆಲಸದ ಅನುಭವ. ಥಿಯೇಟರ್ ನರ್ಸ್ ಹುದ್ದೆಗೆ ಕಳೆದ 2 ವರ್ಷದಲ್ಲಿ ಕನಿಷ್ಠ ಒಂದು ವರ್ಷದ ಅನುಭವ ಮತ್ತು ಮೆಂಟಲ್ ಹೆಲ್ತ್ ನರ್ಸ್ ಹುದ್ದೆಗೆ ಸೈಕ್ಯಾಟ್ರಿ ವಾರ್ಡ್‌ನಲ್ಲಿ ಕನಿಷ್ಠ 6 ತಿಂಗಳ ಕೆಲಸದ ಅನುಭವವನ್ನು ಹೊಂದಿರಬೇಕು.

ನರ್ಸಿಂಗ್ ಕೌನ್ಸಿಲ್ ನೋಂದಣಿಯ ನಂತರ ಸೈಕಿಯಾಟ್ರಿಕ್ ವಾರ್ಡ್‌ನಲ್ಲಿ ಕನಿಷ್ಠ 6 ತಿಂಗಳ ಎಕ್ಸ್‌ಪೀರಿಯನ್ಸ್ ಹೊಂದಿರುವ ಉದ್ಯೋಗಿಗಳು (OET/IELTS ಪರೀಕ್ಷೆಗೆ ತಯಾರಿ ನಡೆಸುತ್ತಿರುವವರು) ಆಯ್ಕೆ ಆದರೆ ಅವರ OET ಟ್ರೈನಿಂಗ್ ಮತ್ತು ಪರೀಕ್ಷೆಯ ಫೀಸ್ NHS ಟ್ರಸ್ಟ್‌ ನೀಡುತ್ತದೆ.

ಆಯ್ಕೆಯಾದ ಅಭ್ಯರ್ಥಿಗಳಿಗೆ ಶಾಶ್ವತ ನೇಮಕಾತಿ ಲಭ್ಯವಿರುತ್ತದೆ. ರಿಜಿಸ್ಟರ್ಡ್ ನರ್ಸ್ ಆದ ಮೇಲೆ ಬ್ಯಾಂಡ್ 5 ಪ್ರಕಾರದ ವೇತನ ಮತ್ತು ಇತರೆ ಪ್ರಯೋಜನಗಳನ್ನು ಪಡೆಯಬಹುದು. ಆಸಕ್ತ ಅಭ್ಯರ್ಥಿಗಳು ತಮ್ಮ ಬಯೋಡಾಟ, OET /IELTS ಸ್ಕೋರ್ ಕಾರ್ಡ್, ಅರ್ಹತೆ ಸಾಬೀತುಪಡಿಸುವ ಪ್ರಮಾಣಪತ್ರಗಳು, ಪಾಸ್‌ಪೋರ್ಟ್‌ನ ಪ್ರತಿ, ಮತ್ತು ಇತರೆ ಸಂಬಂಧಿತ ದಾಖಲೆಗಳ‌ ಸಹಿತ uknhs.norka@kerala.gov.in ಇಮೇಲ್ ಗೆ ಅರ್ಜಿ ಸಲ್ಲಿಸಬಹುದು ಅಥವಾ ನೋರ್ಕ ಇನ್‌ಸ್ಟಿಟ್ಯೂಟ್ ಆಫ್ ಫಾರಿನ್ ಲ್ಯಾಂಗ್ವೇಜ್ ವೆಬ್‌ಸೈಟ್ (www.nifl.norkaroots.org) ಸಂದರ್ಶಿಸಿ ಅರ್ಜಿ ಸಲ್ಲಿಸಬಹುದು. ರಿಕ್ರೂಟ್‌ಮೆಂಟ್‌ ಸಂಪೂರ್ಣವಾಗಿ ಉಚಿತವಾಗಿದೆ.

ಅನಿವಾಸಿ ಕೇರಳೀಯರಿಗಾಗಿ ಕೇರಳ ಸರ್ಕಾರದ ಫೀಲ್ಡ್ ಏಜೆನ್ಸಿಯಾಗಿದೆ ತಿರುವನಂತಪುರದಲ್ಲಿ ಕಾರ್ಯನಿರ್ವಹಿಸುತ್ತಿರುವ ನೋರ್ಕ ರೂಟ್ಸ್. ಕೇಂದ್ರ ವಿದೇಶಾಂಗ ಸಚಿವಾಲಯದ ಪ್ರೊಟೆಕ್ಟರ್ ಜನರಲ್ ಆಫ್ ಎಮಿಗ್ರೇಷನ್ (ಎಮಿಗ್ರೇಷನ್ ಆಕ್ಟ್ 1983 ರ ಅಡಿಯಲ್ಲಿ) ಅನುಮತಿಸಲಾದ ರಾಜ್ಯಾಂತರ ರಿಕ್ರೂಟ್‌ಮೆಂಟ್ ಲೈಸನ್ಸ್ ಪಡೆದ ಸಂಸ್ಥೆಯಾಗಿದೆ ನಾರ್ಕಾ ರೂಟ್ಸ್.

ಸಂಶಯ ನಿವಾರಣೆಗಾಗಿ 24 ಗಂಟೆಗಳು ಕಾರ್ಯನಿರ್ವಹಿಸುತ್ತಿರುವ ನೋರ್ಕ ಗ್ಲೋಬಲ್ ಕಾಂಟಾಕ್ಟ್ ಸೆಂಟರಿನ ಟೋಲ್ ಫ್ರೀ ನಂಬರ್ (ಇಂಗ್ಲಿಷ್, ಮಲಯಾಳಂ) 18004253939 ಭಾರತದಿಂದ +91 8802012345 ವಿದೇಶದಿಂದ (ಮಿಸ್ಡ್ ಕೋಲ್ ಸೌಲಭ್ಯ) ಸಂಪರ್ಕಿಸಬಹುದು. www.norkaroots.orgwww.nifl.norkaroots.org ಎಂಬೀ ವೆಬ್‌ಸೈಟ್‌ಗಳಲ್ಲಿ ಮಾಹಿತಿ ಲಭ್ಯವಿದೆ.

അറ്റാച്ചുമെൻ്റുകൾ

പ്രസിദ്ധീകരണത്തിന് തീയതി: 27 Jan 2025
തിരുവനന്തപുരം

പബ്ലിക് റിലേഷൻസ് ഓഫീസർ

ഡൗൺലോഡ്

Chat Icon